ಕಲ್ಪನೆಗಳ ಕನವರಿಕೆಯಲ್ಲಿ ಮನಸಿಗೆ ತೋಚಿದ ಹಾಗೆ ಗೀಚಿದ ಕವನಗಳು
ನಿನ್ನೆ ಕಣ್ಣು ಮುಚ್ಚಿ
ಕಣ್ಣಂಚಲ್ಲಿ ಕಂಡ
ಕನಸು ಅದು
ಇಂದು ಕಣ್ಣಾಲಿಗಳ
ಕಣ್ಣೀರಲ್ಲಿ ಕರಗಿ ಹೋಗಿದೆ.......... SBK
ಸುರಿವ ಮಳೆಯ
ನಡುವೆ ಕೊಡೆಯ
ಹಿಡಿದು ನಡೆಯುತಿರೆ
ನೀ ಜೊತೆಗಿರಲು
ಇಡುವ ಪ್ರತಿ ಹೆಜ್ಜೆಯಲು
ಹೊಸತನವೇ ತುಂಬಿಹುದು.......... SBK
ಅಮವಾಸೆಯ
ಕಡು ಕತ್ತಲಲಿ
ಕಣ್ಣು ತೆರೆದು
ನೋಡಿದರೂ
ಕೂಡ ಕಾಣುವುದು
ಬರಿ ಕಪ್ಪು ಬಣ್ಣವೇ.........SBK
ಹುಣ್ಣಿಮೆಯ
ಬೆಳದಿಂಗಳು
ಎಷ್ಟು ಚೆಲ್ಲಿದ್ದರೂ
ಕಣ್ಣು ಮುಚ್ಚಿ ಕುಳಿತರೆ
ಕಾಣುವುದು ಕಡು ಕಪ್ಪೇ ... :) PBS :)
ಕನಸುಗಳೆಂದರೆ
ಕಣ್ಣುಗಳೊಳಗೆ
ಬಣ್ಣ ಬಣ್ಣದ
ಚಿತ್ತಾರ ಬಿಡಿಸುವ
ಮನಸಿನ ಒಳಗೆ
ಸುಮಧುರ ಭಾವಗಳನು
ಮೂಡಿಸುವ ಒಂದು ಸುಂದರ ಯಾನ ...............-SBK
ಸತ್ತು ಹೋಗಿರುವ ಭಾವನೆಗಳ ನಡುವೆ
ಬಿಟ್ಟು ಹೋಗಿರುವ ಭಾಂಧವ್ಯಕ್ಕೇನು ಬೆಲೆ
ಉಸಿರಿಗೆ ಉಸಿರೇ ನಿಂತು ಹೋಗಿರುವಾಗ ...
ಅಳಿದಅಳಿದುಹೋಗುವ ದೇಹಕ್ಕಿನ್ನೇನು ಬೆಲೆ..... -SBK
ಮರಳುಗಾಡಿನಲಿ ನೆರಳು ದೊರೆತಂತೆ
ಬರಡು ಭೂಮಿಯಲಿ ಮಳೆ ಸುರಿದಂತೆ
ಕಾರಿರುಳ ಕತ್ತಲಲಿ ಬೆಳಕು ಹರಿದಂತೆ
ನೀ ಬಂದಿರುವೆ ನನ್ನ ಬಾಳಲಿ
ನೀನಿಲ್ಲದೆ ನಾ ಹೇಗೆ ಬಾಳಲಿ??? ..... -SBK
ನಿನ್ನೆ ಕಣ್ಣು ಮುಚ್ಚಿ
ಕಣ್ಣಂಚಲ್ಲಿ ಕಂಡ
ಕನಸು ಅದು
ಇಂದು ಕಣ್ಣಾಲಿಗಳ
ಕಣ್ಣೀರಲ್ಲಿ ಕರಗಿ ಹೋಗಿದೆ.......... SBK
ಸುರಿವ ಮಳೆಯ
ನಡುವೆ ಕೊಡೆಯ
ಹಿಡಿದು ನಡೆಯುತಿರೆ
ನೀ ಜೊತೆಗಿರಲು
ಇಡುವ ಪ್ರತಿ ಹೆಜ್ಜೆಯಲು
ಹೊಸತನವೇ ತುಂಬಿಹುದು.......... SBK
ಅಮವಾಸೆಯ
ಕಡು ಕತ್ತಲಲಿ
ಕಣ್ಣು ತೆರೆದು
ನೋಡಿದರೂ
ಕೂಡ ಕಾಣುವುದು
ಬರಿ ಕಪ್ಪು ಬಣ್ಣವೇ.........SBK
ಹುಣ್ಣಿಮೆಯ
ಬೆಳದಿಂಗಳು
ಎಷ್ಟು ಚೆಲ್ಲಿದ್ದರೂ
ಕಣ್ಣು ಮುಚ್ಚಿ ಕುಳಿತರೆ
ಕಾಣುವುದು ಕಡು ಕಪ್ಪೇ ... :) PBS :)
ಕನಸುಗಳೆಂದರೆ
ಕಣ್ಣುಗಳೊಳಗೆ
ಬಣ್ಣ ಬಣ್ಣದ
ಚಿತ್ತಾರ ಬಿಡಿಸುವ
ಮನಸಿನ ಒಳಗೆ
ಸುಮಧುರ ಭಾವಗಳನು
ಮೂಡಿಸುವ ಒಂದು ಸುಂದರ ಯಾನ ...............-SBK
ಸತ್ತು ಹೋಗಿರುವ ಭಾವನೆಗಳ ನಡುವೆ
ಬಿಟ್ಟು ಹೋಗಿರುವ ಭಾಂಧವ್ಯಕ್ಕೇನು ಬೆಲೆ
ಉಸಿರಿಗೆ ಉಸಿರೇ ನಿಂತು ಹೋಗಿರುವಾಗ ...
ಅಳಿದಅಳಿದುಹೋಗುವ ದೇಹಕ್ಕಿನ್ನೇನು ಬೆಲೆ..... -SBK
ಮರಳುಗಾಡಿನಲಿ ನೆರಳು ದೊರೆತಂತೆ
ಬರಡು ಭೂಮಿಯಲಿ ಮಳೆ ಸುರಿದಂತೆ
ಕಾರಿರುಳ ಕತ್ತಲಲಿ ಬೆಳಕು ಹರಿದಂತೆ
ನೀ ಬಂದಿರುವೆ ನನ್ನ ಬಾಳಲಿ
ನೀನಿಲ್ಲದೆ ನಾ ಹೇಗೆ ಬಾಳಲಿ??? ..... -SBK